Ramakrishna Motivation Journal

A quiet space for reflections on mindset, life skills, parenting, and inner growth — written across languages, meant to be read slowly.

 

Control vs Freedom

ಹಣ ನಮ್ಮ ಕೈಯಲ್ಲಿದೆಯಾ? ಅಥವಾ ನಾವು ಹಣದ ಕೈಯಲ್ಲಿದ್ದೇವಾ?


ಬಹುತೇಕ ಜನರು ಹೀಗೆ ಹೇಳುತ್ತಾರೆ:

“ನಾನು ಹಣವನ್ನು control ಮಾಡ್ತೀನಿ.”

ಆದರೆ ದಿನನಿತ್ಯದ ನಿರ್ಧಾರಗಳನ್ನು ನೋಡಿದರೆ ಬೇರೆ ಕಥೆ ಕಾಣಿಸುತ್ತದೆ.

  • Job ಬಿಡಲು ಧೈರ್ಯ ಇಲ್ಲ
  • Risk ತೆಗೆದುಕೊಳ್ಳಲು ಭಯ
  • Time ಮೇಲೆ control ಕಡಿಮೆ
  • EMI ಗಳಿಂದ ಉಸಿರುಗಟ್ಟುವುದು

ಇಲ್ಲಿ ಪ್ರಶ್ನೆ ಇದು:

ಹಣ ನಮ್ಮನ್ನು ಬೆಂಬಲಿಸುತ್ತಿದೆಯಾ? ಅಥವಾ ನಿಯಂತ್ರಿಸುತ್ತಿದೆಯಾ?

Control ಅಂದ್ರೇನು?

Control ಅಂದ್ರೆ:

  • Income predictable ಆಗಿರುವುದು
  • Expenses manage ಮಾಡಿರುವುದು
  • Bills timeಗೆ pay ಮಾಡುವುದು

ಇದು ಅಗತ್ಯ. ಆದರೆ ಇದನ್ನೇ freedom ಅಂತ ಭ್ರಮೆ ಮಾಡ್ತೀವಿ.

Freedom ಅಂದ್ರೇನು?

Freedom ಅಂದ್ರೆ:

  • “No” ಹೇಳುವ ಸಾಮರ್ಥ್ಯ
  • Job ಇಲ್ಲದಿದ್ದರೂ ಬದುಕುವ ಶಕ್ತಿ
  • Time ಮೇಲೆ ಆಯ್ಕೆ
  • ಭಯದಿಂದ ಅಲ್ಲ — ಆಯ್ಕೆಯಿಂದ ನಿರ್ಧಾರ

Freedom control ಕ್ಕಿಂತ ಒಂದು ಹಂತ ಮೇಲಿನ ಸ್ಥಿತಿ.

Golden Handcuffs – ಸುಂದರವಾದ ಸೆರೆ

ಉತ್ತಮ salary, benefits, lifestyle…

ಹೊರಗಿನಿಂದ ಎಲ್ಲವೂ perfect.

ಆದರೆ ಒಳಗಿನಿಂದ “ಇದಿಲ್ಲದೆ ನಾನು ಬದುಕಲಾರೆ” ಎಂಬ ಭಾವನೆ.

ಇದನ್ನೇ Golden Handcuffs ಎನ್ನುತ್ತಾರೆ.

ಬುದ್ಧಿವಂತರಿಗೆ ಈ trap ಏಕೆ?

ಬುದ್ಧಿವಂತರು stability-ಯನ್ನು safety ಅಂತ confuse ಮಾಡ್ತಾರೆ.

ಅವರು risk-ನ್ನು avoid ಮಾಡ್ತಾರೆ — ಆದರೆ risk avoid ಮಾಡೋದೂ ಒಂದು risk ಅನ್ನುವುದನ್ನು ಮರೆತಿರುತ್ತಾರೆ.

Stability comfort ಕೊಡುತ್ತದೆ. Freedom growth ಕೊಡುತ್ತದೆ.

ಹಣ control ನಿಂದ freedom ಗೆ ಹೇಗೆ?

Freedom sudden jump ಅಲ್ಲ.

  • Emergency fund build ಮಾಡಿ
  • Fixed expenses ಕಡಿಮೆ ಮಾಡಿ
  • Lifestyle commitments slow ಮಾಡಿ
  • Skills & options ಹೆಚ್ಚಿಸಿ

Income ಇಲ್ಲದ ದಿನಕ್ಕೂ plan ಇರಬೇಕು.

Day 7 – Core Message

ಹಣವನ್ನು control ಮಾಡುವುದು ಸಾಕಾಗುವುದಿಲ್ಲ.

ಹಣ ಇಲ್ಲದಿದ್ದರೂ ಬದುಕುವ ಸಾಮರ್ಥ್ಯ ಬಂದಾಗಲೇ ನಿಜವಾದ freedom.

Control comfort ಕೊಡುತ್ತದೆ. Freedom ಆಯ್ಕೆ ಕೊಡುತ್ತದೆ.

👉 Coming Next (Day 8)

Wealth vs Richness
ನಿಜವಾದ ಸಂಪತ್ತು ಯಾವುದು?


© Ramakrishna Motivation Journal
Learning Partner: Shaktimatha Learning

No comments:

Post a Comment

  PUBLIC SPEAKING SERIES भाग 14 – Advanced Speaking Techniques (निष्कर्ष) Public Speaking में उन्नत बोलने की तकनीकें (Advanc...

📚 Journal Library